ನಗರ ಕೋಟೆ

ಶಿವಮೊಗ್ಗದಿಂದ ಕೊಲ್ಲೂರಿಗೆ ಹೋಗುವ ಮಾರ್ಗದಲ್ಲಿ ನಗರವೆಂಬ ಊರಿದೆ.  ಸುಪ್ರಸಿದ್ಧವಾದ ಶ್ರೀರಾಮಚಂದ್ರಾಪುರಮಠದಿಂದ ೧೦ ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ ಶಿವಪ್ಪನಾಯಕನ ಕೋಟೆಯು ಕಣ್ಣೆದುರಿಗೆ ನಿಲ್ಲುತ್ತದೆ. ಗುಡ್ಡದ ಮೇಲೆ ತುಂಬ ದೊಡ್ಡದಾದ ಜಾಗದಲ್ಲಿದೆ. ಸುತ್ತಲೂ ಹರಿದ್ವರ್ಣದ ಕಾಡುಗಳು, ಗುಡ್ಡಗಳು, ಗದ್ದೆಗಳು, ಕೆರೆ-ಬಾವಿಗಳು, ನದಿ-ತೊರೆಗಳು, ತೆಂಗು, ಅಡಿಕೆ, ಭತ್ತ, ಕಬ್ಬುಗಳು. ಹೀಗೆ ಮಲೆನಾಡಿನ ಎಲ್ಲ ಸೌಂದರ್ಯದ ನಡುವೆ ಎತ್ತರದಲ್ಲಿ ಈ ಕೋಟೆ ನಿಂತಿದೆ. ಕೋಟೆಯ ಒಳ ಹೋಗುವಾಗ ಹೆಬ್ಬಾಗಿಲು ನಮ್ಮನ್ನು ತಡೆಯುತ್ತದೆ. ಅದನ್ನು ನಿಧಾನವಾಗಿ ತೆರೆದು ಒಳಗೆ ಹೊಕ್ಕರೆ ಹೊಸರೀತಿಯ ಅಡಿಪಾಯದ ಅರಮನೆಯ ನಿರ್ಮಾಣ ಕಾಣುತ್ತದೆ. 

ಅರಮನೆಯ ಒಳಗೆ ಪ್ರವೇಶ ಮಾಡುವ ಜಾಗ ತಗ್ಗಾಗಿದ್ದು,  ಹೋದಮೇಲೆ ೫೦ ಅಡಿಗಳಷ್ಟು ಎತ್ತರ ಹೋಗಿ ನಿಂತರೆ ಅರಮನೆಯ ವಿಶಾಲ ಜಾಗ ಕಾಣುತ್ತದೆ. ಬಾವಿ ಕೂಡ ಕೋಟೆಯ ಒಳಗಡೆ ಇದೆ. ಅಲ್ಲಿ ಹೋಗಿ ನೋಡುವಾಗ ಅರಮನೆಯ ಅವಶೇಷಗಳಿಂದ ಅರಮನೆ ಹೇಗಿತ್ತು ಎನ್ನುವುದನ್ನು ಊಹಿಸಬಹುದು. ಅಷ್ಟರ ಮಟ್ಟಿಗೆ ಗೊತ್ತಾಗುತ್ತದೆ. ರಾಜದರ್ಬಾರ್ ನಡೆಯುವ ವಿಶಾಲ ಜಾಗವನ್ನು ಪತ್ತೆಹಚ್ಚಬಹುದು. 

ಕೋಟೆಯ ಜನರಿಗೆ ನೀರು ಪೂರೈಸಲು ಪಕ್ಕದಲ್ಲಿ ದೊಡ್ಡದಾದ ಕೆರೆಯಿದೆ. ಸದಾ ನೀರು ತುಂಬಿರುತ್ತದೆ.
ಇತಿಹಾಸವನ್ನು ಗುರುತಿಸಲಿಕ್ಕೆ ಒಂದು ಸುಲಭ ಉಪಾಯವೆಂದರೆ ದೇವಾಲಯವಾಗಲಿ ಅಥವಾ ದೊಡ್ಡ ಕೋಟೆಗಳಾಗಲಿ ಅದರ ಪಕ್ಕದಲ್ಲಿ ಒಂದು ವಿಶಾಲವಾದ ಕೆರೆ ಅಥವಾ ಬಾವಿಗಳು ಇದ್ದೇ ಇರುತ್ತವೆ. ಅಂತಹ ಜಾಗದಲ್ಲಿ ಹಿಂದಿನವರು ವಾಸಿಸುತ್ತಿದ್ದರು. ಅದರ ಆಧಾರದ ಮೇಲೆ ಪ್ರಾಚೀನವೋ ನವೀನವೋ ನೋಡಬಹುದು. 

ಶಿವಪ್ಪನಾಯಕನದೇ ಆದ ಮತ್ತೊಂದು ಸಣ್ಣ ಕೋಟೆ ಅಲ್ಲಿಯೇ ೧೦ ಕಿ.ಮೀ ದೂರದಲ್ಲಿದೆ.

-- 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಒಂದು ಪುಟ್ಟ ಕಥೆ

ಅರ್ಧಕುಕ್ಕುಟೀನ್ಯಾಯ

ಕಂಟಕನ್ಯಾಯ