ಮಂಗಳವಾರ 3 ಜನವರೀ 2012

ನಮ್ಮ ನಾಡೇ ನಮಗೆ ನಂದನವನ


ಹೇಗೆ ಅಂತಿರಾ...?
ಆಂಗ್ಲಕವಿ ಒಂದು ಸುಂದರ ಪದ್ಯವನ್ನ ಸಮಾಜಕ್ಕೆ ನೀತಿಯನ್ನು ತುಂಬಿ ನೀಡಿದ್ದಾನೆ. ಜನ್ಮಭೂಮಿಯನ್ನ ಮರೆತರೆ ಏನಾದೀತು ಎನ್ನುವ ಕುರಿತು. ಇದು ಅಮೇರಿಕನ್ನರ ಮನೋಭಾವವನ್ನೂ ಪ್ರತಿಬಿಂಬಿಸುತ್ತದೆ. ಬಹಳ ಸ್ವಾರಸ್ಯವಾಗಿದೆ. 
ರಷ್ಯಾದ ಕ್ಯಾಸಿಯಸ್ ಗೆ ಅಮೇರಿಕದಲ್ಲಿ ಕೆಲಸ ಸಿಕ್ಕಿತು. ಬಹಳ ಕಾಲ ಅಲ್ಲಿಯೇ ಇದ್ದ. ಅಲ್ಲಿಯ ಸಂಸ್ಕೃತಿಗೆ, ಅಲ್ಲಿಯರ ಸ್ವಭಾವಕ್ಕೆ ಹೊಂದಿಕೊಂಡಿದ್ದ. ಅವನಿಗೆ ಅದೇ ದೊಡ್ಡ ಪ್ರಪಂಚ. ಇದನ್ನು ಹೊರತುಪಡಿಸಿ ಮತ್ತೇನು ಇರಲಿಕ್ಕಿಲ್ಲ ಎಂದು ನಂಬಿ ಅಮೇರಿಕವನ್ನೇ ತನ್ನ ತಾಯ್ನಾಡಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ.
ಹೀಗೆ ಕಾಲ ಕಳೆಯುತಿದ್ದ. ಒಂದು ಬಾರಿ ಅಂತರಾಷ್ಟ್ರೀಯ ಮಟ್ಟದ ಯಾವುದೋ ಸ್ಪರ್ಧೆಗೆ ಭಾಗವಹಿಸಲು ಬೇರೆ ದೇಶಕ್ಕೆ ಹೋದ. ಅಲ್ಲಿ ಇವನ ಪ್ರತಿಸ್ಪರ್ಧಿಯಾಗಿ ಇದ್ದವ ರಷ್ಯಾದವ. ಕ್ಯಾಸಿಯಸ್ ನ ಪ್ರತಿಭೆಗೆ ರಷ್ಯಾದವ ಸೋತು ಬಿಟ್ಟ. ಇವನ ಸ್ವರ್ಣಪದಕವನ್ನು ಮಡೆದ. ಆದರೆ ಕ್ಯಾಸಿಯಸ್ ರಷ್ಯಾದವನೆಂದು ಆಮೇಲೆ ತಿಳಿಯಿತು. ಅಲ್ಲಿಯ ಅಧ್ಯಕ್ಷರು ಅವನನ್ನು ಸ್ವಂತ ದೇಶಕ್ಕೆ ಬಾ ಎಂದು ಕರೆದರು. ಅವನಿಗೆ ನಿನ್ನ ಪ್ರತಿಭೆ ಸರಿಯಾದ ಸ್ಥಾನವನ್ನು ಕೊಡುವುದಾಗಿ ಕೂಡ ಹೇಳಿದರು. ಆದರೆ ಕ್ಯಾಸಿಯಸ್ ನ ತಲೆಯಲ್ಲಿ ಅಮೇರಿಕವೇ ತುಂಬಿ ತುಳುಕುತ್ತಿತ್ತು. ಅಲ್ಲಿಯವ ಕುರಿತಾಗ ಹೆಮ್ಮೆಯಿಂದ ಬಡಾಯಿ ಕೊಚ್ಚಿಕೊಳ್ಳುತ್ತಾನೆ. ಅಮೇರಿಕ ತನ್ನನ್ನು ಹೇಗೆ ಸ್ವಾಗತಿಸುತ್ತದೆ ಎಂದು ಬಹಳ ಮನೋಜ್ಞವಾಗಿ ವಿವರಿಸಿದ. ಎಷ್ಟು ಬೇಡಿಕೊಂಡರೂ ಸ್ವದೇಶಕ್ಕೆ ಹೋಗಲು ಒಪ್ಪಲಿಲ್ಲ. 
ಅಲ್ಲಿಂದ ಸ್ವರ್ಣಪದಕದೊಂದಿಗೆ ಅಮೇರಿಕ್ಕೆ ಬಂದ. ಕ್ಯಾಸಿಯಸ್ ಗೆ ಒಂದು ಕಡೆ ಅವಮಾನ. ಮತ್ತೊಂದ್ದು ಕಡೆಯಿಂದ ಆಶ್ಚರ್ಯ. ಒಂಟಿತನ ಎಂದಿನಂತೆ ಕಾಡುತ್ತಿತ್ತು. ಕೇಳುವವರೂ ಯಾರೂ ಇಲ್ಲ. ತನ್ನ ಸುತ್ತಮುತ್ತಲ ಪರಿಸರದಲ್ಲಿಯೂ ಎಂದಿನಂತೆ ತಲೆ ತಗ್ಗಿಸಿಕೊಂಡು ಹೋಗುವವರೇ. ಯಾರು ಮಾತನಾಡಿಸುವವರಿಲ್ಲ. 
ಯಾಕೆ ಅಂದರೆ...?
ಅವನು ನೀಗ್ರೋ ಜನಾಂಗದವನಾಗಿದ್ದನು. ನೀಗ್ರೋ ಜನಾಂಗವೆಂದರೆ ಕಪ್ಪು ಜನ. ಹಾಗಾಗಿ ಅವನನ್ನು ಅಮೇರಿಕದವರು ಸ್ವೀಕರಿಸಲಿಲ್ಲ. ಹಾಗಾಗಿ ಗೆದ್ದು ತಂದ ಸ್ವರ್ಣಪದಕವನ್ನು ನೀರಿಗೆ ಹಾಕಿಬಿಟ್ಟನು. ತನ್ನ ದೇಶಕ್ಕೆ ಪುನಃ ಹಿಂತಿರುಗಿದ. 
ಹಾಗಾಗಿ ನಮ್ಮವರು 'ಸ್ವದೇಶೋ ಭುವನತ್ರಯಮ್' ಎಂದು ಸಾರಿ ಹೇಳಿದರು.